Main Page
|
"e-governence National Award to Municipal Reforms Cell" ಪುರಸಭೆ ಕಾರ್ಯಾಲಯ ಸಿಂದಗಿ
IN THE NEWS : Sindagi is one of 74 Karnataka cities deplyoying in 2007-08 Municipal eGovernance modules of Property Tax, Financial Accounting GIS Mapping, Public Grievance Redressal, Birth & Death Certification and Ward works, KARNATAKA MUNICIPAL REFORMS PROJECT (KMRP) is a partnership between the eGovernments Foundation & Survey of India, These computer based systems coupled with Govt.process re-engineering and GIS digital mapping will provide transparency and accountability and smoother delivery of services to citizens.
Town Budget :-
ಘನತ್ಯಾಜ್ಯ ವಸ್ತು ಸಂಗ್ರಹಣೆ : ಸಿಂದಗಿ ಪಟ್ಟಣದ ಘನತ್ಯಾಜ್ಯ ವಸ್ತು ನಿರ್ವಹಣೆ ಹಾಗೂ ವಿಲೇವಾರಿಗಾಗಿ ಕಲಕೇರಿ ರಸ್ತೆಯಲ್ಲಿ ಸ.ನಂ. 614/2 ರಲ್ಲಿ 5.00 ಎಕರೆ ಜಮೀನನ್ನು ಖರೀಧಿಸಲಾಗಿದೆ. ಸದರಿ ಜಾಗೆಯಲ್ಲಿ ಪಿಟ್ ಮೆತಡದಲ್ಲಿ ಘನತ್ಯಾಜ್ಯ ವಸ್ತುವನ್ನು ವಿಲೇವಾರಿ ಮಾಡಲಾಗುತ್ತಿದೆ. ಸದರಿ ಜಾಗೆಯ ಸೂತ್ತಲೂ ತಂತಿಬೇಲಿ, ಸಂಪರ್ಕ ರಸ್ತೆ, ವಾಚಮನ್ ಶೆಡ್ ಹಾಗೂ ಬೋರ್ ವೆಲ್ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಘನತ್ಯಾಜ್ಯ ವಸ್ತು ನಿರ್ವಹಣೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ಕ್ರಿಯಾಯೋಜನೆಯ ಪ್ರಕಾರ ಖರೀಧಿಸಲಾಗಿದೆ. ಪುರಸಭೆಯ 23 ವಾರ್ಡಗಳಲ್ಲಿನ ಬೀದಿ ಗುಡಿಸುವುದು, ಗಟಾರ ಸ್ವಚ್ಛಗೊಳಿಸುವದು, ಮನೆಮನೆಗೆ ಹೋಗಿ ಕಸ ಸಂಗ್ರಹಣೆ (ಪ್ರಾಥಮಿಕ ಸಂಗ್ರಹಣೆ) ಯನ್ನು ಪುರಸಭೆ ಸಿಬ್ಬಂದಿಯವರು ನಿರ್ವಹಿಸುತ್ತಿದ್ದಾರೆ. ನಗರ ಸ್ವಚ್ಛತೆಗೆ ಸಂಬಂಧಿಸಿದಂತೆ ಹಾಗೂ ಇತರೆ ದೂರುಗಳಿಗಾಗಿ ಕಛೇರಿಯಲ್ಲಿ ಸಾರ್ವಜನಿಕ ಕುಂದುಕೊರತೆ ವಿಭಾಗ ದಿನದ 12 ಘಂಟೆಗಳ ಕಾಲ ಕೆಲಸ ನಿರ್ವಹಿಸುತ್ತಿದೆ. ಯಾವುದಾದರೂ ದೂರುಗಳಿದ್ದಲ್ಲಿ ದೂರವಾಣಿ ಸಂಖ್ಯೆ 08488-221444 ಗೆ ದೂರುಗಳನ್ನು ದಾಖಲು ಮಾಡಬಹುದು. “ ನಗರದ ಸ್ವಚ್ಚತೆಯನ್ನು ಕಾಪಾಡಲು ನಾಗರೀಕರು ಸಹಕರಿಸಬೇಕಾಗಿ ವಿನಂತಿ “
ಸಿಂದಗಿ ಪಟ್ಟಣದ ಬಗ್ಗೆ : ಸಿಂದಗಿ ಪಟ್ಟಣವು ಬಿಜಾಪೂರ ಜಿಲ್ಲೆಯಲ್ಲಿನ ಪ್ರಮುಖ ತಾಲೂಕು ಕೇಂದ್ರವಾಗಿದ್ದು ವ್ಯವಸಾಯವೇ ಮುಖ್ಯ ಕಸಬಾಗಿರುತ್ತದೆ. ಕಬ್ಬು, ಶೇಂಗಾ, ತರಕಾರಿಗಳು ಪ್ರಮುಖ ವ್ಯವಸಾಯೊತ್ಪನ್ನಗಳು ಮಧ್ಯಮ ಜನರು ಹೆಚ್ಚಾಗಿ ವಾಸಿಸುವಂತಹ ಮತ್ತು ಅಭಿವೃದ್ದಿ ಪಥದಲ್ಲಿರುವ ಪಟ್ಟಣವಾಗಿರುತ್ತದೆ. ಪಟ್ಟಣವು ಬಿಜಾಪೂರದಿಂದ ಸುಮಾರು ೬೦ ಕಿ.ಮೀ ದೂರದಲ್ಲಿದೆ. ಪಟ್ಟಣದಿಂದ ಚಿಕ್ಕೋಡಿ ಜೇವರ್ಗಿ ರಾಷ್ಟ್ರ ಹೆದ್ದಾರಿ ನಂ. 218 ಬರುತ್ತದೆ ಮತ್ತು ಸಿಂದಗಿ ಶಹಾಪೂರ ರಾಜ್ಯ ಹೆದ್ದಾರಿ ಸಂಖ್ಯೆ ೧೬ ಈ ಎರಡು ಹೆದ್ದಾರಿಗಳು ಹಾದು ಹೋಗುವದರಿಂದ ಪಟ್ಟಣವು ತ್ವರಿತಗತಿಯಲ್ಲಿ ಬೆಳವಣಿಗೆ ಕಂಡಿದೆ.
|



